News and Media

ಪ್ರತಿಕಾ ಪ್ರಕಟಣೆ ಕೃಪೆಗಾಗಿ

ಬೀದರ, ಏ. ೨೦- ಬೀದರ ವಿಧಾನಸಭೆ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ರವರ ಪರ ಪಕ್ಷದ ಗಣ್ಯರು ನಗರದಲ್ಲಿಂದು ಬಿರುಸಿನ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು.

ಸೋಮವಾರ ಸಾಯಂಕಾಲ ನಗರದ ಬಸವೇಶ್ವರ ವೃತ್ತದಿಂದ ಪಾದಯಾತ್ರೆಯ ಮೂಲಕ ಮತಯಾಚಿಸುತ್ತ, ನಗರದ ಅಂಬೇಡ್ಕರ್ ವೃತ್ತ, ಕರಿಯಪ್ಪ ವೃತ್ತ, ಹರಳಯ್ಯಾ ವೃತ್ತ, ಶಿವಾಜಿ ವೃತ್ತ, ಭಗತಸಿಂಗ್ ವೃತ್ತ, ಭಮಗೊಂಡೇಶ್ವರ ವೃತ್ತ, ಅಕ್ಕಮಹಾದೇವಿ ವೃತ್ತದ ಮುಖಾಂತರ ವಿದ್ಯಾನಗರದ ರಾಮಚೌಕನಲ್ಲಿ ಸಮಾವೇಶಗೊಳಿಸಲಾಯಿತು.

ನಗರದ ಪ್ರತಿ ಅಂಗಡಿ-ಮುಗ್ಗಟ್ಟುಗಳಿಗೆ, ಮನೆ-ಮನೆಗೆ ಭೇಟಿ ನೀಟಿ, ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿದ ಗಣ್ಯರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನಪರ ಯೋಜನೆಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಿ, ಮುಖ್ಯಮಂತ್ರಿಗಳ ಕೈ ಬಲಪಡಿಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು.

ಬೀದರ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷದ ಅಭ್ಯರ್ಥಿಗೆ ಮತಹಾಕಿ ಗೆಲ್ಲಿಸಿದರೆ, ಮುಂಬರುವ ದಿನಗಳಲ್ಲಿ ಬೀದರ ಕ್ಷೇತ್ರವು ಅಭಿವೃದ್ಧಿ ಪಥದತ್ತ ಸೂರ್ಯಕಾಂತ ನಾಗಮಾರಪಳ್ಳಿ ಅವರು ಕೊಂಡ್ಯೂಯುತ್ತಾರೆ. ಹೀಗಾಗಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಾಬುರಾವ ಮದಕಟ್ಟಿ, ಮಾಜಿ ಶಾಸಕ ನಾರಾಯಣರಾವ ಮನ್ನಳ್ಳಿ, ಜಿಲ್ಲಾ ವಕ್ತಾರ ಬಾಬುವಾಲಿ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಪವಾರ, ನಗರ ಘಟಕ ಅಧ್ಯಕ್ಷ ಮಹೇಶ ಪಾಲಂ, ಮುಖಂಡರಾದ ಬಸವರಾಜ ಪಾಟೀಲ್ ಅಷ್ಟೂರ್, ಎನ್.ಆರ್.ವರ್ಮಾ, ಸೂರ್ಯಕಾಂತ ಶೆಟಕಾರ, ಭರತ ಶೆಟಕಾರ, ಕಿರಣ ಚಂದಾ, ಶ್ರೀಮತಿ ಶಕುಂತಲಾ ಬೆಲ್ದಾಳೆ, ಶ್ರೀಮತಿ ಚಂದ್ರಕಲಾ ವಿಶ್ವಕರ್ಮ, ರಾಜೇಂದ್ರ ಸಿಂಗ್ ಠಾಕೂರ್, ಶೈಲೇಂದ್ರ ಬೆಲ್ದಾಳೆ, ಶಶಿ ಹೊಸಳ್ಳಿ, ವೀರುಪಾಕ್ಷ ಗಾದಗಿ, ಶಿವಪುತ್ರ ವ್ಯದ್ಯ, ರಾಜು ಚಿದ್ರಿ, ಸುರೇಶ ಮಾಶೆಟ್ಟಿ, ಹಣಮಂತ ಬುಳ್ಳಾ, ರೌಫೋದ್ದಿನ ಕಚೇರಿವಾಲಾ ಸೇರಿದಂತೆ ಅಪಾರ ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದರು.

ವಂದನೆಗಳೊಂದಿಗೆ,
ಬಾಬುವಾಲಿ
ಜಿಲ್ಲಾ ವಕ್ತಾರರು

copyright©2009 www.gurupadappa.com All Rights Reserved. Powered by Dhyeya