ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ ೧೧೮ನೇ ಜಯಂತಿ ಆಚರಣೆ
ಬೀದರ, ಏ. ೧೪- ಭಾರತೀಯ ಜನತಾ ಪಾರ್ಟಿ ವತಿಯಿಂದ ನಗರದ ಹೋಟಲ್ ಮಯೂರಾದ ಮಾಧ್ಯಮ ಕೇಂದ್ರದಲ್ಲಿಂದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ ೧೧೮ನೇ ಜಯಂತಿ ಆಚರಣೆ ಮಾಡಲಾಯಿತು.
ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸದ ಪಕ್ಷದ ಜಿಲ್ಲಾಧ್ಯಕ್ಷ ಬಾಬುರಾವ ಮದಕಟ್ಟಿ ಅವರು ಮಾತನಾಡಿ, ಡಾ. ಅಂಬೇಡ್ಕರ ಅವರು ಕೊಡುಗೆ ದೇಶಕ್ಕೆ ಅಪಾರವಾಗಿದೆ. ಅಂಬೇಡ್ಕರ, ಬಸವೇಶ್ವರ, ಶಿವಾಜಿ, ಕನಕದಾಸರು ಸೇರಿದಂತೆ ಎಲ್ಲಾ ಮಹಾನ ವ್ಯಕ್ತಿಗಳ ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಆದರೆ ಪ್ರಸ್ತುತ ಇಂಥ ಮಹಾನ ವ್ಯಕ್ತಿಗಳನ್ನು ಒಂದು ಜಾತಿ-ಜನಾಂಗಕ್ಕೆ ಸೀಮಿತಗೊಳಿಸುವುದು ಉತ್ತಮ ಬೆಳವಣಿಗೆವಲ್ಲ. ಎಲ್ಲರೂ ಸೇರಿ ಎಲ್ಲಾ ಮಹಾನ ವ್ಯಕ್ತಿಗಳ ಜಯಂತಿ ಆಚರಿಸೋಣ ಎಂದು ಕರೆ ನೀಡಿದರು.
ಮಾಜಿ ಶಾಸಕ ರಾಜೇಂದ್ರ ವರ್ಮಾ ಮಾತನಾಡಿ, ಪ್ರಸ್ತುತ ಇಂದಿನ ಯುಗದಲ್ಲಿ ದೀತನ ದಲಿತರು ಸಮಾಜದಲ್ಲಿ ಬಾಳಬೇಕಾದರೆ ಅದು ಅಂಬೇಡ್ಕರ್ ಅವರೇ ಕಾರಣ ಎಂದು ನಾವು ಹೆಮ್ಮೆಯಿಂದ ಹೇಳಬೇಕಾಗಿದೆ. ನ್ಯಾಯ ಹಾಗೂ ಸಮಾನತೆ ಒದಗಿಸುವಲ್ಲಿ ಡಾ. ಅಂಬೇಡ್ಕರ ಅವರ ಶ್ರಮ ಅಪಾರ. ಅಂಬೇಡ್ಕರ ಅವರು ದಲಿತರಿಗೆ ಮೀಸಲಾತಿ ಒದಗಿಸಿಕೊಟ್ಟಿದ್ದು ಮಾತ್ರವಲ್ಲದೆ, ಸಾಮಾಜಿಕ ಸಮಾನತೆ ಒದಗಿಸಲು ಸರಕಾರಗಳಿಗೆ ಕೆಲ ಜವಾಬ್ದಾರಿಗಳಣ್ನು ವಹಿಸಿದ್ದಾರೆ. ಅವರ ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.
ಬಿಜೆಪಿ ಪಕ್ಷವನ್ನು ಹೊರತು ಪಡಿಸಿ ಉಳಿದ ಪಕ್ಷಗಳೆಲ್ಲವು ದೀನ, ದಲಿತರನ್ನು ಯಾವುದೇ ಒಂದು ಉನ್ನತ ಸ್ಥಾನಮಾನ ನೀಡಿದೆ ಕೇವಲ ಓಟ್‌ಗಾಗಿ ಮಾತ್ರ ಬಳಸಿಕೊಂಡಿವೆ. ಆದರೆ ಭಾರತೀಯ ಜನತಾ ಪಕ್ಷವು ದಲಿತ ಮುಖಂಡ ಬಂಗಾರು ಲಕ್ಷ್ಮಣ ರವರನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ಮಾಡಿ ದಲಿತರ ಬಗ್ಗೆ ಪಕ್ಷದ ಕಾಳಜಿ ಏನು ಎಂಬುವುದು ತೋರಿಸಿದ್ದಾರೆ.
ಬೀದರ ವಿಧಾನಸಭೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಅವರು ಮಾತನಾಡಿ, ದೇಶದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ಅಟಲ್ ಜೀ ನೇತೃತ್ವದ ಹಿಂದಿನ ಎನ್‌ಡಿಎ ಸರಕಾರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ನೀತಿಗಳನ್ನು ಜಾರಿಗೊಳಿಸುವುದರ ಮೂಲಕ ಸಂವಿಧಾನಕ್ಕೆ ಬದ್ಧವಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ದಲಿತರನ್ನು ಮುನ್ನೆಡೆಸಿದ್ದು ಅದು ಕೇವಲ ಬಿಜೆಪಿ ಪಕ್ಷವೆಂದು ನಾವು ಹೆಮ್ಮೆಯಿಂದ ಹೇಳಬಹುದಾಗಿದೆ. ಮುಂಬರುವ ದಿನಗಳಲ್ಲಿ ನಗರಕ್ಕೆ ತರುವ ಕೈಗಾರಿಕೆಗಳಲ್ಲಿ ಶೆ. ೨೦ ರಷ್ಟು ಮೀಸಲಾತಿಯು ಹಿಂದುಳಿದ ದಲಿತರಿಗೆ ನೀಡಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಜೈಕುಮಾರ ಕಾಂಗೆ ಮಾತನಾಡಿ, ಅಂಬೇಡ್ಕರ ಅವರ ಹೆಸರು ಬೇರೆ ಪಕ್ಷಗಳು ಉಪಯೋಗಿಸಿಕೊಂಡು ರಾಜಕೀಯ ಮಾಡುತ್ತಿವೇ. ಆದರೆ ದಲಿತರ ಏಳ್ಗೆಗಾಗಿ ಬೇರೆ ಪಕ್ಷಗಳೂ ಎಂದು ಕಾಳಜಿ ವಹಿಸಿಲ್ಲ. ಆದರೆ ಭಾರತೀಯ ಜನತಾ ಪಕ್ಷವು ದಲಿತರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಲಿತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳು ರೂಪಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನಾರಾಯಣರಾವ ಮನ್ನಳ್ಳಿ, ಜಿಲ್ಲಾ ವಕ್ತಾರ ಬಾಬುವಾಲಿ, ಜಿಪಂ ಸದಸ್ಯ ರಾಜಶೇಖ ನಾಗಮೂರ್ತಿ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಪವಾರ, ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಅನೀಲ ಗುಂಡಪ್ಪ, ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ಚಂದ್ರಕಲಾ ವಿಶ್ವಕರ್ಮ, ತಾಲೂಕಾ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ, ನಗರ ಘಟಕ ಅಧ್ಯಕ್ಷ ಮಹೇಶ ಪಾಲಂ, ಮುಖಂಡರಾದ ರೌಫೋದ್ದಿನ ಕಚೇರಿವಾಲಾ, ರಾಮಣ್ಣಾ ಶೆರಿಕಾರ ಸೇರಿದಂತೆ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಿವಪುತ್ರ ವೈದ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು.