ಪ್ರತಿಕಾ ಪ್ರಕಟಣೆ ಕೃಪೆಗಾಗಿ
ಬೀದರ, ಏ. ೨೦- ಕಾಂಗ್ರೆಸ್‌ನ ಹಿರಿಯ ಮುಖಂಡ, ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ವೈಜಿನಾಥ ಆನಂದೆ ಅವರು ಭಾರತೀಯ ಜತನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಭಾನುವಾರ ತಾಲೂಕಿನ ಗಾದಗಿ ಗ್ರಾಮದಲ್ಲಿ ಸಾಯಂಕಾಲ ನಡೆದ ಸಮಾರಂಭದಲ್ಲಿ ಬೀದರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯಥಿ ಸೂರ್ಯಕಾಂತ ನಾಗಮಾರಪಳ್ಳಿ ಅವರು ವೈಜಿನಾಥ ಆನಂದೆ ಅವರಿಗೆ ಹೂಮಾಲೆ ಹಾಕುವುದರ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸೂರ್ಯಕಾಂತ ನಾಗಮಾರಪಳ್ಳಿ ಅವರು, ವೈಜಿನಾಥ ಆನಂದೆ ಅವರು ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲಬಂದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಹಲವು ಮುಖಂಡರು ಪಕ್ಷಕ್ಕೆ ಬಂದಿದ್ದು, ಎಲ್ಲೇಡೆ ಬಿಜೆಪಿ ಪರ ಅಲೆ ಇದೆ. ನನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜಕುಮಾರ ಕರಂಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಂದನೆಗಳೊಂದಿಗೆ,
ಬಾಬುವಾಲಿ
ಜಿಲ್ಲಾ ವಕ್ತಾರರು