ಕನ್ನಡ

ಗುರುಪಾದಪ್ಪ ನಾಗಮಾರಪಳ್ಳಿ ಇವರ ವ್ಯಕ್ತಿ ಪರಿಚಯದ ವಿವರಗಳು:

ಹೆಸರು  :ಗುರುಪಾದಪ್ಪ ನಾಗಮಾರಪಳ್ಳಿ
ತಂದೆಯ ಹೆಸರು :ಸಂಗನಬಸಪ್ಪ ನಾಗಮಾರಪಳ್ಳಿ

ವಿಳಾಸ
ಬೀದರ್: ಚಿಂತಾಕಿ ಗ್ರಾಮ, ಔರಾದ್ ತಾಲ್ಲೂಕು,
ಬೀದರ್ ಜಿಲ್ಲೆ  ೫೮೫ ೩೨೬,
ಕರ್ನಾಟಕ ರಾಜ್ಯ.

ಬೆಂಗಳೂರು:ನಂ:೩೨೨, “ಸರಸ್ವತಿ” ೫ನೇ ಕ್ರಾಸ್, ೧ನೇ ಬ್ಲಾಕ್, ಬಿ.ಡಿ.ಎ.ಕಾಂಪ್ಲೆಕ್ಸ್ ಎದುರು, ಆರ್.ಟಿ.ನಗರ, ಬೆಂಗಳೂರು-೫೬೦ ೦೩೨.
ದೂರವಾಣಿ: (ಟೆಲಿಫ್ಯಾಕ್ಸ್): ೦೮೦-೨೩೩೩ ೬೨೨೭, ೨೩೩೩ ೪೮೭೬, ೨೩೬೩ ೮೦೩೬.
ಮೊಬೈಲ್ : ೯೮೪೫೧ ೫೪೦೦೦
ಈಮೈಲ್: n.gurupadappa@yahoo.com

ಹುಟ್ಟಿದ ದಿನಾಂಕ ಮತ್ತು ವಯಸ್ಸು:  ೧೧-೧೧-೧೯೪೨  ೬೭ ವರ್ಷಗಳು

ಹುಟ್ಟಿದ ಸ್ಥಳ: ನಾಗಮಾರಪಳ್ಳಿ ಗ್ರಾಮ, ಔರಾದ್ ತಾಲ್ಲೂಕು

ಕೌಟುಂಬಿಕ ವಿವರಗಳು  :ವಿವಾಹಿತರು, ಪತ್ನಿ (ದಿವಂಗತ) ಶ್ರೀಮತಿ. ಸರಸ್ವತಿ,
೫ ಜನ ಗಂಡು ಮಕ್ಕಳು ೨ ಹೆಣ್ಣು ಮಕ್ಕಳು

ವೃತ್ತಿ/ಉದ್ಯೋಗ :ಕೃಷಿಕರು

ಪ್ರಸ್ತುತ ಸಲ್ಲಿಸುತ್ತಿರುವ ಸೇವೆ

ಅಧ್ಯಕ್ಷರು:  ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿ., ಬೀದರ್

ಅಧ್ಯಕ್ಷರು:  ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಬೀದರ್

ನಿರ್ದೇಶಕರು: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ., ಬೆಂಗಳೂರು

ನಿರ್ದೇಶಕರು: ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ನಿ., ಬೆಂಗಳೂರು

ಈ ಹಿಂದೆ ಸಲ್ಲಿಸಿರುವ ಸೇವೆಗಳು

ಸೇವೆಗಳು ೧೯೮೫ ರಿಂದ ೨೦೦೭ ರವರೆವಿಗೆ ಬೀದರ್ ಜಿಲ್ಲೆಯ ಔರಾದ್ ಮತಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಣೆ

೨೦೦೮ ರಲ್ಲಿ ಬೀದರ್ ಮತಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಣೆ

೧೯೮೯ ರಲ್ಲಿ ಗೃಹ ರಾಜ್ಯ ಸಚಿವರಾಗಿ ಕಾರ್ಯನಿರ್ವಹಣೆ

೧೯೯೬-೧೯೯೮ರ ಅವಧಿಯಲ್ಲಿ ಸಂಪುಟ ದರ್ಜೆಯ ಅರಣ್ಯ ಸಚಿವರಾಗಿ ಕಾರ್ಯನಿರ್ವಹಣೆ

೨೦೦೫-೨೦೦೬ ರ ಅವಧಿಯಲ್ಲಿ ಸಂಪುಟ ದರ್ಜೆಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ ಕಾರ್ಯನಿರ್ವಹಣೆ

ಸಹಕಾರ ಕ್ಷೇತ್ರದ ಸಾಧನೆಯ ಒಂದು ಮೈಲಿಗಲ್ಲು

೧೯೮೭ರಲ್ಲಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಬೀದರ್ ಜಿಲ್ಲೆಯಲ್ಲಿ ಸ್ವ ಸಹಾಯ ಗುಂಪುಗಳನ್ನು ರಚಿಸಲಾಯಿತು ಇದರಡಿಯಲ್ಲಿ ಇಲ್ಲಿಯವರೆವಿಗೆ ಸುಮಾರು ಸುಮಾರು ೨ಲಕ್ಷ ೧೨ಸಾವಿರ ಸಂಖ್ಯೆಯ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಯಾವುದೇ ಭದ್ರತೆಯನ್ನು ಪಡೆದುಕೊಳ್ಳದೇ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಈ ಕುಟುಂಬಗಳ ಆರ್ಥಿಕ, ಸಾಮಾಜಿ ಹಾಗೂ ಶೈಕ್ಷಣಿಕ ಅಭಿವೃದ್ದಿಗೆ ನೆರವಾಗಿದ್ದಾರೆ. ಮೇಲ್ಕಂಡ ಎಸ್.ಎಚ್.ಜಿ. ಗುಂಪುಗಳ ಪೈಕಿ ಸುಮಾರು ೧ ಲಕ್ಷ ೯ ಸಾವಿರ ಜನರು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದವರಾಗಿರುತ್ತಾರೆ.

ದೇಶದಲ್ಲಿಯೇ ಪ್ರಥವಬಾರಿಗೆ ಬೀದರ್‌ನಲ್ಲಿ ಸುಸಜ್ಜಿತವಾದ ಮತ್ತು ಹೈಟೆಕ್ ತಂತ್ರಜ್ಞಾನವನ್ನು ಒಳಗೊಂಡ ಒಂದು ಸಹಕಾರ ತರಬೇತಿ ಕೇಂದ್ರವನ್ನು (ಸಹಾರ್ದ) ಬೀದರ್‌ನಲ್ಲಿ ಸ್ಥಾಪಿಸಿದ್ದಾರೆ.  ಈ ತರಬೇತಿ ಕೇಂದ್ರದಲ್ಲಿ ಸಹಕಾರಿ ರಂಗದ ವಿವಿಧ ವಿಷಯಗಳ ಬಗ್ಗೆ ಮತ್ತು ಸ್ವ ಸಹಾಯ ಗುಂಪುಗಳ ಪರಿಕಲ್ಪನೆಯ ಬಗ್ಗೆ ನೂರಾರು ತರಬೇತಿ ಶಿಬಿರಗಳು, ಕ್ಷೇತ್ರದರ್ಶನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.  ಇಲ್ಲಿಯವರೆವಿಗೆ ದೇಶಾದ್ಯಂತ ಹಾಗೂ ಹಲವಾರು ವಿದೇಶಿ ಸಂಘ ಸಂಸ್ಥೆಗಳ ಸದಸ್ಯರು/ಬ್ಯಾಂಕುಗಳ ಮುಖ್ಯಸ್ಥರು  ಈ ಕೇಂದ್ರಕ್ಕೆ ಭೇಟಿ ನೀಡಿ ತರಬೇತಿಯನ್ನು ಪಡೆದುಕೊಂಡಿರುತ್ತಾರೆ.

ಈ ತರಬೇತಿ ಕೇಂದ್ರಕ್ಕೆ ಇಲ್ಲಿಯವರೆವಿಗೆ ನಮ್ಮ ದೇಶದ ಸುಮಾರು ೧೫೦ ಡಿ.ಸಿ.ಸಿ.ಬ್ಯಾಂಕಿನ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಭೇಟಿ ನೀಡಿ ತರಬೇತಿಯನ್ನು ಪಡೆದುಕೊಂಡಿರುತ್ತಾರೆ ಹಾಗೂ ಈ ಕೇಂದ್ರವನ್ನು ಅಭಿನಂದಿಸಿರುತ್ತಾರೆ.  ಈ ಸಹಕಾರ ತರಬೇತಿ ಕೇಂದ್ರದ ಕಾರ್ಯನಿರ್ವಹಣೆಯನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕೂ ಸಹ ಮೆಚ್ಚುಗೆ ಸೂಚಿಸಿದ್ದು ಇದಕ್ಕಾಗಿ ಹಲವಾರು ಬಾರಿ ಹಿಂದಿನ ಕೇಂದ್ರ ಸರ್ಕಾರದ  ಹಣಕಾಸು ಸಚಿವರುಗಳು ೧೯೯೯ ರಿಂದ ಇಲ್ಲಿಯವರೆವಿಗೆ ಹಲವಾರು ಬಹುಮಾನಗಳು ಹಾಗೂ ನಗದು ಬಹುಮಾನಗಳನ್ನು ನೀಡಿ ಗೌರವಿಸುತ್ತಾ ಬಂದಿದ್ದಾರೆ.

ರುಡ್‌ಸೆಟಿ:
ರಾಷ್ಟ್ರದಲ್ಲಿಯೇ ಮೊದಲಬಾರಿಗೆ ಬೀದರ್ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಬೀದರ್‌ನಲ್ಲಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಸಣ್ಣ ಪ್ರಮಾಣದ ಕೈಗಾರಿಕಾ ತರಬೇತಿಯನ್ನು (ರೂಡ್‌ಸೆಟಿ) ನೀಡುವ ಸಲುವಾಗಿ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಈ ಕೇಂದ್ರದ ಮೂಲಕ ಇಲ್ಲಿಯವರೆವಿಗೆ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ವಿವಿಧ ಬಗೆಯ ಉದ್ಯೋಗಗಳಲ್ಲಿ ತರಬೇತಿಯನ್ನು ನೀಡಿ ಆನಂತರ ಅವರುಗಳಿಗೆ ಬೀದರ್ ಡಿ.ಸಿ.ಸಿ.ಬ್ಯಾಂಕಿನಿಂದ ಹಾಗೂ ಇತರೆ ಸಹಕಾರಿ ಸಂಘ ಸಂಸ್ಥೆಗಳಿಂದ ಹಾಗೂ ಬ್ಯಾಂಕುಗಳಿಂದ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಹಣಕಾಸಿನ ನೆರವನ್ನು ಕೊಡಿಸುವಲ್ಲಿ ಸಹಾಯ ಮಾಡಲಾಗುತ್ತಿದೆ.

ಅಪರೆಲ್ ತರಬೇತಿ ಕೇಂದ್ರ:
ಇವರ ಆಸಕ್ತಿಯ ಫಲವಾಗಿ ಬೀದರ್ ನಗರದಲ್ಲಿ ಇತ್ತೀಚೆಗೆ ಸಿದ್ದ ಉಡುಪುಗಳ ಹೊಲಿಗೆ ತರಬೇತಿ ಕೇಂದ್ರ (ಅಪರೆಲ್ ಟ್ರೈನಿಂಗ್) ವನ್ನು ಸ್ಥಾಪಿಸಲಾಗಿದ್ದು ಈ ಕೇಂದ್ರದ ಮೂಲಕ ಗ್ರಾಮೀಣ ಮಹಿಳೆಯರಿಗೆ ಟೈಲರಿಂಗ್ ವೃತ್ತಿಯಲ್ಲಿ ಆಧುನಿಕ ಟೈಲರಿಂಗ ಮೆಷಿನ್‌ಗಳ ಮೂಲಕ ತರಬೇತಿಯನ್ನು ನೀಡಿ ಅವರುಗಳು ಟೈಲರಿಂಗ್ ಮೆಷಿನ್ ಕೊಂಡುಕೊಳ್ಳು ಬೀದರ್ ಡಿ.ಸಿ.ಸಿ.ಬ್ಯಾಂಕಿನಿಂದ ಸಾಲ ಸೌಲಭ್ಯ ಹಾಗೂ ಅವರುಗಳಿಗೆ ಅಗತ್ಯವಾಗಿರುವ ದುಡಿಯುವ ಬಂಡವಾಳದ ಸೌಲಭ್ಯಗಳನ್ನು ಒದಗಿಸಲು ನೆರವಾಗುತ್ತಿದ್ದಾರೆ.

ಸ್ತ್ರೀ ಶಕ್ತಿ ಗುಂಪುಗಳು:
ಬೀದರ್ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕು ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ “ಸ್ತ್ರೀ ಶಕ್ತಿ” ಗುಂಪುಗಳಿಗೆ ಎಲ್ಲ ವಿಧವಾದ ಸಹಕಾರವನ್ನು ನೀಡುತ್ತಿದೆ ಹಾಗೂ ಈ ಗುಂಪುಗಳಿಗೆ ಸಾಲ ಮತ್ತು ಇತರೆ ಸೌಲಭ್ಯಗಳನ್ನು ಬ್ಯಾಂಕಿನ ವತಿಯಿಂದ ಕಲ್ಪಿಸುವುದಲ್ಲದೆ ಈ ಗುಂಪುಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಿಕೊಡುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ.

ವಿವಿವಿ (ವಿಕಾಸ್ ವಾಲಂಟೀರ್ ವಾಹಿನಿ ಕ್ಲಬ್) ರೈತರ ಕ್ಲಬ್‌ಗಳು :
ಬೀದರ್ ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಇವರ ಆಸಕ್ತಿಯ ಫಲವಾಗಿ ಇಂದು ಬೀದರ್ ಜಿಲ್ಲೆಯಾದ್ಯಂತ ೩೫೦ ವಿವಿವಿ ರೈತರ ಕ್ಲಬ್‌ಗಳನ್ನು ಸ್ಥಾಪಿಸಲಾಗಿದೆ ಈ ಕ್ಲಬ್‌ಗಳಿಂದಾಗಿ ರೈತರು ಶೂನ್ಯ ಬಂಡವಾಳದಿಂದ ಅವರ ವರಮಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವುದಲ್ಲದೆ ಕೃಷಿ ಮತ್ತು ಇತರೆ ಸಂಬಂಧಿತ ಕ್ಷೇತ್ರಗಳಲ್ಲಿ ನವೀನ ತಂತ್ರಜ್ಞಾನವನ್ನು ಅಳವಡಿಸಿ ಕೃಷಿ ಉತ್ಪನ್ನಗಳ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿ ಯಾಗಿದೆ.  ಈ ಕ್ರಮವನ್ನು ಜಿಲ್ಲೆಯ ಕೃಷಿಕರು ಹಾಗೂ ಪರಿಣಿತರು ಶ್ಲಾಘಿಸಿದ್ದಾರೆ. ಬ್ಯಾಂಕಿನ ಈ ಕ್ರಮವನ್ನು ಮೆಚ್ಚಿ ಕೇಂದ್ರ ಸರ್ಕಾರದ ವಿತ್ತ ಸಚಿವರಾಗಿದ್ದ  ಶ್ರೀ ಪಿ.ಚಿದಂಬರಮ್‌ರವರು ಇತ್ತೀಚಿಗೆ ಜಿಲ್ಲೆಯ ಒಂದು ವಿವಿವಿ ಕ್ಲಬಿಗೆ ಮೊದಲನೇ ಬಹುಮಾನವನ್ನು ವಿತರಿಸಿರುತ್ತಾರೆ.

ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಸಹ ವಿದ್ಯುತ್ ಘಟಕದ ಉತ್ಪಾಧನೆ    ಬೀದರ್ ಜಿಲ್ಲೆಯಲ್ಲಿ ಶಂಕುಸ್ಥಾಪನೆಗೊಂಡು ೧೮ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಕೇವಲ ೧೮ ತಿಂಗಳ ದಾಖಲೆಯ ಅವಧಿಯಲ್ಲಿ ೨೦೦೦ನೇ ಇಸವಿಯಲ್ಲಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. ಈ ಕಾರ್ಖಾನೆಯ ಪ್ರಾರಂಭದಿಂದಾಗಿ ಬೀದರ್ ಜಿಲ್ಲೆಯ ರೈತರು ವಿಶೇಷವಾಗಿ ಕಬ್ಬು ಬೆಳೆಗಾರರಿಗೆ ಅನುಕೂಲವಾಗುವ ಮೂಲಕ ಅವರ ಬಹುಕಾಲದ ಕನಸನ್ನು ನನಸು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ವಿದ್ಯುತ್ ಉತ್ಪಾದನೆ:
ಈ ಕಾರ್ಖಾನೆಯಲ್ಲಿ ಕಬ್ಬಿನ ಸಿಪ್ಪೆಯನ್ನು ಉಪಯೋಗಿಸಿಕೊಂಡು ಸಹ ವಿದ್ಯುತ್ ಘಟಕವನ್ನು ಸ್ಥಾಪಿಸಲಾಗಿದ್ದು ಇದರಿಂದಾಗಿ ಕಳೆದ ೬ವರ್ಷಗಳಿಂದ ಪ್ರತಿ ದಿನ ೮ ಮೆಗಾವಾಟ್ ವಿದ್ಯುತ್ತನ್ನು ಉತ್ಪಾದನೆ ಮಾಡಿ ಕಾರ್ಖಾನೆಗೆ ಅಗತ್ಯವಿರುವ ವಿದ್ಯುತ್ತನ್ನು ಬಳಸಿಕೊಂಡು ಹೆಚ್ಚುವರಿ ೪ ಮೆಗಾವಾಟ್ ವಿದ್ಯುತ್ತನ್ನು ಪವರ್ ಗ್ರೀಡ್‌ಗೆ ನೀಡುತ್ತಿದ್ದು ಈಗ ಇದರ ಸಾಮರ್ಥ್ಯವನ್ನು ೧೪ ಮೆಗಾವಾಟ್‌ಗೆ ಹೆಚ್ಚಿಸಲಾಗುತ್ತಿದೆ. ಕಾರ್ಖಾನೆಯ ಈ ಕ್ರಮದಿಂದಾಗಿ ರಾಜ್ಯದ ವಿದ್ಯುತ್ ಸಮಸ್ಯೆಗೆ ಸ್ವಲ್ಪಮಟ್ಟಿನ ಉಪಯೋಗವಾಗುತ್ತಿದೆ.

ಈ ಹಿಂದೆ ಸೇವೆ ಸಲ್ಲಿಸಿದ ಕ್ಷೇತ್ರಗಳು

ನಿರ್ದೇಶಕರು: ರಾಷ್ಟ್ರೀಯ ಸಹಕಾರ ಮಾರಾಟ ಮಹಾ ಮಂಡಲ, ನವದೆಹಲಿ (ನ್ಯಾಫೆಡ್)

ಉಪಾಧ್ಯಕ್ಷರು:ರಾಜ್ಯ ಸಹಕಾರ ಬ್ಯಾಂಕುಗಳ ರಾಷ್ಟ್ರೀಯ ಒಕ್ಕೂಟ, ಮುಂಬಯಿ (ನ್ಯಾಫ್‌ಸ್ಕಾಬ್)

ಗವರ್ನಿಂಗ್ ಕೌನ್ಸಿಲ್ ಸದಸ್ಯರು:ರಾಷ್ಟೀಯ ಸಹಕಾರ ಯೂನಿಯನ್, ನವದೆಹಲಿ (ಎನ್.ಸಿ.ಯು.ಐ)

ನಿರ್ದೇಶಕರು:ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ-ಆಪರೇಟಿವ್ ಲಿ.,(ಇಫ್ಕೋ) ನವದೆಹಲಿ

ನಿರ್ದೇಶಕರು:ಕೃಷಿಕ ಭಾರತಿ ಕೋ-ಆಪರೇಟಿವ್ ಲಿ.,(ಕ್ರಿಬ್ಕೋ) ನವದೆಹಲಿ

ಅಧ್ಯಕ್ಷರು:ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ., ಬೆಂಗಳೂರು

ಅಧ್ಯಕ್ಷರು:ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಲ ನಿ., ಬೆಂಗಳೂರು

ನಿರ್ದೇಶಕರು:ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಲ ನಿ., ಬೆಂಗಳೂರು

ನಿರ್ದೇಶಕರು:ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾಮಂಡಲ ನಿ., ಬೆಂಗಳೂರು

ಅಧ್ಯಕ್ಷರು:ಪ್ರಾಥಮಿಕ ಸಹಕಾರಿ ಭೂ ಅಭಿವೃದ್ದಿ ಬ್ಯಾಂಕ್ ನಿ., ಔರಾದ್, ಬೀದರ್ ಜಿಲ್ಲೆ.

ಅಧ್ಯಕ್ಷರು:ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಔರಾದ್, ಬೀದರ್ ಜಿಲ್ಲೆ.

ಸಮಾಜ ಸೇವೆ
ಬೀದರ್ ಜಿಲ್ಲೆಯಲ್ಲಿರುವ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳೊಂದಿಗೆ ಸಕ್ರೀಯವಾಗಿ ತೊಡಗಿಸಿ ಕೊಂಡಿರುತ್ತಾರೆ.

ಹವ್ಯಾಸಗಳು
ಕುದುರೆ ಸವಾರಿ ಮತ್ತು ಪುಸ್ತಕಗಳನ್ನು ಓದುವುದು

copyright©2009 www.gurupadappa.com All Rights Reserved. Powered by Dhyeya